ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮನಗರ ಸಮೀಪ ರಾಮಕುಂಟೆ ಬಳಿ ನಾಗರಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಐವರ ಪೈಕಿ ನಾಲ್ಕು ಜನರನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ಪ್ರಭಾಸ್, ಸಲ್ಮಾನ್, ಶಾರುಖ್ ಖಾನ್,ಮೂರ್ತಿ ಎಂದು ತಿಳಿದು ಬಂದಿದ್ದು, ತರುಣ್ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ.