ಬೀದಿ ನಾಯಿಗಳ ದಾಳಿಗೆ ಕರುವೊಂದು ಬಲಿಯಾರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹಿಂಭಾಗ ನಡೆದಿದ್ದು, ನಾಯಿಗಳ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿ ಗುರುವಾರ ಮಧ್ಯರಾತ್ರಿ ಮಲಗಿದ್ದ ಕರುವಿನ ಮೇಲೆ ಐದಕ್ಕೂ ಅಧಿಕ ನಾಯಿಗಳು ಕಚ್ಜಿ ಗಾಯಗೊಳಿಸಿ ಕೊಂದು ಹಾಕಿವೆ. ಕರುವಿನ ಮೇಲೆ ನಡೆಸಿರುವ ಭೀಕರ ದಾಳಿ ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಮಕ್ಕಳು, ಹಿರಿಯ ನಾಗರಿಕರ ಮೇಲೆ ದಾಳಿ ಮಾಡಿದರೆ ಏನು ಗತಿ ಎಂದು ಪಟ್ಟಣ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ನಾಯಿಗಳ ಗುಂಪು ಕರುವನ್ನು ಕಚ್ಚಿ ಎಳೆದೊಯ್ಯುತ್ತಿದ್ದರೂ ಸಹ ಜೊತೆಯಾಗಿದ್ದ ಮತ್ತೊಂದು ಕರು ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.