ಗಣೇಶೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಪ್ರತಿಷ್ಟಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಭಾನುವಾರ ಸಂಜೆ 4:15ಕ್ಕೆ ಅತ್ಯಂತ ಸಡಗರ ಸಂಭ್ರಮ ಮಧ್ಯ ನೇರವೇರಿತು. ಈ ವೇಳೆ ಸುವರ್ಣಕಾರ್ ಗಣೇಶ ಸಮಿತಿ, ಶಿವಪೂರ ಗಣೇಶ ಸಮಿತಿ, ಡೆಂಟಲ್ ಗಣೇಶ ಸೇರಿದಂತೆ ವಿವಿಧೆಡೆ 5ದಿನಗಳ ಕಾಲ ಪ್ರತಿಷ್ಟಾಪಿಸಲಾದ ಗಣೇಶ ಮೂರ್ತಿಗಳು ವಿಸರ್ಜನೆ ಹಿನ್ನೆಲೆ ಮೂರ್ತಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಯಿತು.