ಈ ಬರಿಯ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿರುವುದರ ಕುರಿತು ನಾವು ಯಾವುದೇ ಹೇಳಿಕೆ ನೀಡುವುದಿಲ್ಲ.ಆದರೆ, ಭಾನು ಮುಸ್ತಾಕ್ ಅವರು ಚಾಮುಂಡಿ ತಾಯಿಯನ್ನು ಒಪ್ಪಿಕೊಂಡು ನಂತರ ದಸರಾ ಉದ್ಘಾಟನೆ ಮಾಡಲಿ ಎಂದು ಕರ್ನಾಟಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ನರಸಿಂಹ ನಾಯಕ ರಾಜುಗೌಡ ಹೇಳಿಕೆ ನೀಡಿದ್ದಾರೆ.ಬುಧವಾರ ಮಧ್ಯಾಹ್ನ ಯಾದಗಿರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಧರ್ಮಸ್ಥಳ ಘಟನೆ ಮರೆಮಾಚಲು ಸರ್ಕಾರ ಭಾನು ಮುಷ್ತಾಕ್ ರನ್ನು ಆಯ್ಕೆ ಮಾಡಿದೆ ಎಂದು ಆರೋಪಿಸಿದರು.ಬಿಜೆಪಿ ಯುವ ಮುಖಂಡ ಮಹೇಶ ರೆಡ್ಡಿ ಮುದ್ನಾಳ ಉಪಸ್ಥಿತರಿದ್ದರು.