ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಅಣ್ಣ ತಮ್ಮ ಇಬ್ಬರು ಒಂದೇ ಗಂಟೆಯ ಮಧ್ಯದ ಸಮಯದಲ್ಲಿ ಹೃದಯಾಘಾತ ದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಒಂದು ನಡೆದಿದೆ. ಕೆಂಭಾವಿ ಪಟ್ಟಣದ ನಿವಾಸಿಗಳಾದ 50 ವರ್ಷದ ಸಂಶೋದ್ದೀನ್ ಹಾಗೂ ಸುಮಾರು 42 ವರ್ಷ ವಯಸ್ಸಿನ ಇರ್ಫಾನ್ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಬೆಳಗ್ಗೆ 6:00 ಬೆಳಗ್ಗೆ ಮೊದಲು ಅಣ್ಣನಿಗೆ ಹೃದಯಘಾತವಾಗಿದ್ದು ಕೆಂಭಾವಿಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದ್ದು,ಅಣ್ಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ,ನಂತರ ಒಂದು ಗಂಟೆಯಲ್ಲಿ ತಮ್ಮ ಮನೆಯಲ್ಲಿ ಸಾವನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದು ಕೆಂಭಾವಿ ಪಟ್ಟಣದ ಜನತೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.