ಮೊಳಕಾಲ್ಮುರು:-ರಾಯಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯಲ್ಲಿ ಅಪಘಾತವಾಗಿ ಓರ್ವ ಯುವಕ ಸಾವನ್ನಪ್ಪಿರುವಂತಹ ಘಟನೆ ಸೋಮವಾರ ರಾತ್ರಿ 8:00 ಸಮಯದಲ್ಲಿ ನಡೆದಿದೆ. ಮೃತ ಯುವಕನನ್ನು ರಾಯಪುರ ಗೇಟ್ ಬಳಿಯ ಸುಡುಗಾಡು ಸಿದ್ದರ ಕಾಲೋನಿಯ ನಿವಾಸಿ 17 ವರ್ಷದ ಚರಣ್ ಎಂದು ಗುರುತಿಸಲಾಗಿದೆ, ಈತ ಮೂಲತಹ ಮಿಕ್ಸರ್ ರಿಪೇರಿ ವ್ಯಾಪಾರಿಯಾಗಿದ್ದಾನೆ ಎನ್ನಲಾಗಿದೆ. ಬೈಕ್ ನಲ್ಲಿ ತೆರಳುತ್ತಿರುವಾಗ ವಾಹನವೊಂದು ವೇಗವಾಗಿ ಬಂದು ಗುದ್ದಿದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ ಎನ್ನುವ ಪ್ರಾಥಮಿಕ ವರದಿ ತಿಳಿದು ಬಂದಿದೆ. ಮೃತನ ಶವವನ್ನು ಮೊಳಕಾಲ್ಮೂರು ಪಟ್ಟಣದ ಆಸ್ಪತ್ರೆಗೆ ರವಾನಿಸಲಾಗಿದೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿ