ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ ಗ್ರಾಮದ ಬಳಿ ಹೊರವಲಯದಲ್ಲಿ ಇಸ್ಪೀಟಎಂಎಲ್ಎ ಪೊಲೀಸರು ದಾಳಿಯನ್ನು ನಡೆಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಈ ಸಂದರ್ಭದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಕೆಲವರು ಓಡಿಹೋಗಿದ್ದು ಆರು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಂಜುನಾಥ್ ಮಡಿವಾಳ ಎನ್ನುವ ವ್ಯಕ್ತಿ ಒಬ್ಬ ಸಾವನಪ್ಪಿದ್ದು ಈತನ ಸಾವಿನ ಕುರಿತು ಸಾರ್ವಜನಿಕರು ಮನಸ್ಸಿಗೆ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಜುನಾಥನ ಸಾವಿಗೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ.