ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿ ದೆಹಲಿ ಚಲೋ ಕೂಡಾ ಮಾಡಲಿ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇವೆಲ್ಲ ಮಾಡ್ತಿದ್ದಾರೆ. ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರು? ತಿಮರೋಡಿ ಆರೆಸೆಸ್ ಮೂಲದ ವ್ಯಕ್ತಿ, ಗಿರೀಶ್ ಮಟ್ಟಣ್ಣನವರ್ ಬಿಜೆಪಿಯಿಂದ ಗುರುಮಿಠಲ್ ಅಭ್ಯರ್ಥಿ ಆಗಿದ್ದ. ಇದು ಪಕ್ಕಾ ಆರೆಸೆಸ್ ವಿರುದ್ಧ ಆರೆಸೆಸ್ ಹೋರಾಟ. ಬಿಜೆಪಿಯವರಿಗೆ ಯಾವ ಆರೆಸೆಸ್ ನವ್ರಿಗೆ ತಲೆ ಬಾಗಬೇಕು ಅಂತ ಗೊತ್ತಾಗ್ತಿಲ್ಲ. ಆರೆಸೆಸ್ ಬಣಗಳಿಗೆ ಖುಷಿ ಪಡಿಸಲು ಬಿಜೆಪಿಯವ್ರು ಇದೆಲ್ಲ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.