ಕೆ ಆರ್ ಪೇಟೆ ಪಟ್ಟಣದ ಕೆರೆ ಬೀದಿಯಲ್ಲಿರುವ ವೀರ ಆಂಜುನೇಯಸ್ವಾಮಿ ಅವರ ಉತ್ಸವವು ಶ್ರಾವಣ ಮಾಸದ ಕೊನೆಯ ಶನಿವಾರದಂದು ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆಯಿಂದಲೇ ಶ್ರೀವೀರ ಆಂಜುನೇಯಸ್ವಾಮಿ ದೇವರಿಗೆ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳು ಆಂಜನೇಯಸ್ವಾಮಿ ಮೂತರ್ಿಯೊಂದಿಗೆ ಉತ್ಸವವನ್ನು ನಡೆಸಿದರು. ಈ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿಯೊಂದಿಗೆ ಗಾರುಡಿಗೊಂಬೆ ಸೇರಿದಂತೆ ಹಲವು ವೇಷಧಾರಿಗಳು ಭಾಗವಹಿಸಿದ್ದರು. ಬಂದಂತಹ ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗಿತ್ತು