ಡುಸಿ ಸಂಗಪ್ಪ ಅವರು ಹುನಗುಂದ ಮತ್ತು ಇಲಕಲ್ಲ ತಾಲೂಕಿನ ವಿವಿದೆಡೆ ಭೇಟಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ರವನ್ನು ಪರಿಶೀಲಿಸಿದರು.ಹುನಗುಂದ ಪುರಸಭೆ ವ್ಯಾಪ್ತಿಯ ಆಜಾದ ನಗರಕ್ಕೆ ಭೇಟಿ ನೀಡುದ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವ ಗಣತಿ ಕಾರ್ಯವನ್ನು ಪರಿಶೀಲಿಸಿದರು. ಕಮತಗಿ ಪಟ್ಟಣದಲ್ಲೂ ಸಮೀಕ್ಷೆ ಕಾರ್ಯ ಪರಿಶೀಲಿಸಿದರಯ.ನಂತರ ಇಲಕಲ್ಲ ನಗರ ಮತ್ತು ಹನಮನಾಳ ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ಪರಿಶೀಲಿಸಿದರು. ಅಲ್ಲದೇ ಸಮೀಕ್ಷೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.ಇಲಕಲ್ಲನ ಮೆಟ್ರಿಕ್‌ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.