ಕಾಡಿನಿಂದ ನಾಡಿಗೆ ಕಾಡಾನೆಗಳು ಬಂದು ಆತಂಕ ಸೃಷ್ಟಿ ಮಾಡಿದೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸರಳಿಕಟ್ಟೆ ಸಮೀಪ ನೇತ್ರಾವತಿ ನದಿಯಲ್ಲಿ ಎರಡು ಆನೆಗಳು ಜಲಕ್ರೀಡೆ ಆಡುತ್ತಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆಯಲ್ಲಿ ಪೆರ್ನೆ ಎಂಬ ಊರಿನ ಸಮೀಪ ಅನೇಕ ಕೃಷಿಕರ ತೋಟದಲ್ಲಿ ಸುತ್ತಾಡಿದ್ದು, ಇಂದು ಬೆಳಿಗ್ಗೆಯಿಂದ ಸರಳಿಕಟ್ಟೆ ನೇತ್ರಾವತಿ ನದಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದೆ. ಇದೀಗ ಆನೆಗಳು ನಾಡಿಗೆ ಬಂದಿರುವುದರ ಬಗ್ಗೆ ಜನರು ಭಯಭೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ