ಫೋನ್ ಪೇ ಮೂಲಕ ಹಣವನ್ನ ಸ್ನೇಹಿತನ ಖಾತೆಗೆ ಹಾಕಲು ಹೋಗಿ ಹಣ ವಂಚನೆಯಾಗಿರ್ತಕ್ಕಂತ ಘಟನೆ ನಡೆದಿದೆ . ರಾಮನಗರದ ಪೊಲೀಸ್ ಕ್ವಾಟರ್ಸ್ ನಿವಾಸಿ ಯೋಗೇಶ್ ರವರಿಗೆ 1,00,000 ಹಣ ವಂಚನೆಯಾಗಿದೆ ಯೋಗೇಶ್ ರವರು ಸ್ನೇಹಿತನ ಖಾತೆಗೆ ಫೋನ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಲು ಹೋಗಿ ಒಂದು ಅಂಕಿ ತಪ್ಪು ಹಾಕಿದ್ರು. ಹಾಗಾಗಿ ಅವರ ಖಾತೆಗೆ ಹಣ ಹೋಗಿತ್ತು ಹಾಗಾಗಿ ಅವರಿಗೆ ಕರೆ ಮಾಡಿ ಹಣವನ್ನ ಹಿಂತಿರುಗಿಸುವಂತೆ ಕೇಳಿದರು ಹಾಕದೆ ಉದ್ದಟತನ ತೋರಿದ್ದರಿ. ಕೊನೆಗೆ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಹಾಗಾಗಿ ರಾಮನಗರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲು ಮಾಡಲಾಗಿದೆ.