ಉತ್ತರ ಕರ್ನಾಟಕ ಮಹಾಸಭಾ ನೇತೃತ್ವದಲ್ಲಿ 20 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಬಗರಹುಕುಂ ಸಾಗುವಳಿದಾರರ ಬ್ರಹತ್ ಪ್ರತಿಭಟನೆ ನಡೆಯಿತು. ನಿರಂತರ ಹೋರಾಟ ಮಾಡುತ್ತಿದ್ದರು ಸರ್ಕಾರ ಕಣ್ತೆರೆಯದ ಹಿನ್ನಲೆಯಲ್ಲಿ ನಗರದ ಮುಳಗುಂದ ನಾಕಾದಿಂದ ಜಿಲ್ಲಾಡಳಿತ ಭವನದವರೆಗೂ ಉರುಳು ಸೇವೆ ಮಾಡಿ ರೈತರು ಆಕ್ರೋಶ ಅವರ ಹಾಕಿದ್ದಾರೆ. ಈ ವೇಳೆ ನೂರಾರು ಜನ ರೈತರು, ಮಹಿಳೆಯರು ಉರುಳು ಸೇವೆಯಲ್ಲಿ ಭಾಗಿಯಾಗಿದ್ದರು.