ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ವಿಧಾನಸೌಧದಲ್ಲಿ ಸಮಿತಿ ಅಧ್ಯಕ್ಷ ಹೆಚ್ .ಎಂ ರೇವಣ್ಣ ಅವರು ಸೋಮವಾರ ಸಂಜೆ 4:30 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು 98% ಜಾರಿಗೆ ಬಂದಿದೆ. ಅತ್ಯುತ್ತಮ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಶಕ್ತಿಯೋಜನೆಯಿಂದ ರಾಜ್ಯದ ಹಿರಿಮೆಗೆ ಸಾಕ್ಷಿಯಾಗಿದೆ. ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಲಭಿಸಿದೆ. 500ಕೋಟಿ ಹೆಚ್ಚು ಉಚಿತ ಪ್ರಯಾಣವನ್ನು ಮಾಹಿಳೆಯರು ಮಾಡಿದ್ದಾರೆ. ದೇಶ,ವಿದೇಶದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಗೃಹ ಲಕ್ಷಿ 1.24 ಕೋಟಿ ಮಹಿಳೆಯರಿಗೆ ಸಿಗುತ್ತಿದೆ ಇದಕ್ಕಾಗಿ 50 ಸಾವಿರ ಕೋಟಿ ರೂ ಖರ್ಚಾಗಿದೆ ಎಂದರು.