ನಾಡಿನಾದ್ಯಂತ ಸಂಭ್ರಮದಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದ್ದು ಗಣೇಶ ಪ್ರತಿಷ್ಠಾಪನ ಸ್ಥಳಗಳಿಗೆ ಸಚಿವರು ಹಾಗೂ ಸಂಸದರು ತೆರಳಿ ಭಕ್ತಿಯನ್ನು ಸಮರ್ಪಿಸಿದರು. ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಧರ್ಮಪತ್ನಿ ಹಾಗೂ ಸಂಸದರಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ ಅವರೊಂದಿಗೆ ತೆರಳಿ ಗಣೇಶ ಮೂರ್ತಿಗಳಿಗೆ ಭಕ್ತಿಯಿಂದ ನಮಿಸಿದರು. ದಾವಣಗೆರೆ ನಗರದ ದೊಡ್ಡಪೇಟೆಯಲ್ಲಿರುವ ಪ್ರತಿಷ್ಠಿತ ವಿನಾಯಕ ದೇವಸ್ಥಾನಕ್ಕೆ ದಂಪತಿ ಸಮೇತವಾಗಿ ಭೇಟಿ ನೀಡಿ, ವಿಜ್ಞ ನಿವಾರಕ ವಿನಾಯಕನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.