ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಸಮೀಪದ ಚಾನೆಲ್‌ಗೆ ಎರಡು ದಿನಗಳ ಹಿಂದೆ ಬಿದ್ದಿದ್ದ ಅಪರಿಚಿತ ವ್ಯಕ್ತಿ ಯ ಪ್ರಕರಣದ ಬೆನ್ನಲ್ಲೇ, ತಿಮ್ಮರಾಜಿಪುರ ಗ್ರಾಮದ ಚಾನೆಲ್‌ನಲ್ಲಿ ಸೋಮವಾರ ಸಂಜೆ ಯುವಕನ ಶವ ಪತ್ತೆಯಾದದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಎರಡು ದಿನಗಳ ಹಿಂದೆ, ಕೆಂಪನಪಾಳ್ಯ ಬಳಿಯ ಚಾನೆಲ್‌ಗೆ ವ್ಯಕ್ತಿಯೋರ್ವ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ, ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ನೀರಿನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೂ, ಮೃತದೇಹ ಪತ್ತೆಯಾಗದೇ ಇದ್ದಿದ್ದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಈ ಮಧ್ಯೆ, ತಿಮ್ಮರಾಜಿಪುರ ಗ್ರಾಮದ ಚಾನೆಲ್‌ನಲ್ಲಿ ಸೋಮವಾರ ಸಂಜೆ18ವರ್ಷದ, ಪ್ರೀತಮ್ ಎಂಬ ಯುವಕನ ಶವ ಪತ್ತೆಯಾಗಿದೆ.