ಮಳವಳ್ಳಿ : ತಾಲ್ಲೂಕಿನ ಶಿವನ ಸಮುದ್ರ ಬಳಿಯ ವಿಶ್ವ ವಿಖ್ಯಾತ ಗಗನಚುಕ್ಕಿ ಜಲಪಾತದ ಆವರಣ ದಲ್ಲಿ ಪ್ರತೀ ವರ್ಷದಂತೆ ಈ ಬಾರಿ ಸಹ ಗಗನಚುಕ್ಕಿ ಜಲಪಾತೋತ್ಸವ ಬಹು ವಿಜೃಂಭಣೆಯಿಂದ ಜರುಗ ಲಿದ್ದು ಇದ್ದಕ್ಕಾಗಿ ಸಿದ್ದತೆ ಭರದಿಂದ ಸಾಗಿದೆ. ಜಲಪಾತೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6.30 ರ ಸಮ ಯದಲ್ಲಿ ಶಿವನಸಮುದ್ರದ ಗಗನ ಚುಕ್ಕಿ ಜಲಪಾತದ ಆವರಣ ಹಾಗೂ ಸಮಾರಂಭದ ವೇದಿಕೆ ನಿರ್ಮಾಣ ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಭೇಟಿ ನೀಡಿದ ಶಾಸಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ ಎಂ ನರೇಂದ್ರ ಸ್ವಾಮಿ ಪರಿಶೀಲನೆ ನಡೆಸಿದರು.