ಈ ಹಿಂದೆ ಹುಲಿ, ಚಿರತೆ ಓಡಾಡುತ್ತಿದ್ದವು. ಈಗ ಆನೆ ಕೂಡ ನಮ್ಮ ಊರಿನ ಭಾಗಕ್ಕೆ ಬಂದಿದೆ ಎಂದು ರೈತ ಮುಖಂಡ ಶಿವಕುಮಾರ್ ಹೇಳಿದರು. ಪಡಗೂರಲ್ಲಿ ಶನಿವಾರ ಮಾತನಾಡಿ, ನಮ್ಮ ಜಮೀನಿಗೆ ಕೂಲಿ ಕಾರ್ಮಿಕರೇ ಯಾರೂ ಬರುತ್ತಿಲ್ಲ, ಕೇಳಿದ್ರೆ ಚಿರತೆ- ಹುಲಿ ಭಯ ಅಂಥಾರೆ. ಅರಣ್ಯ ಇಲಾಖೆಯವರು ಪ್ರಾಣಿಗಳನ್ನು ಸೆರೆ ಹಿಡಿಯುತ್ತಿಲ್ಲ ಎಂದು ಕಿಡಿಕಾರಿದರು. ಹುಲಿ, ಚಿರತೆ ಬಳಿಕ ಈಗ ಆನೆ ಕೂಡ ಬಂದಿದ್ದು ನಾವು ಕೃಷಿ ಚಟುವಟಿಕೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.