ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ಮುಖ್ಯಮಂತ್ರಿ ಮಾಡಿ ದಲಿತರ ಋಣ ತೀರಿಸಬೇಕು ಎಂದು ದಲಿತ ಚಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್ ಕೆ ಬಸವರಾಜ ಆಗ್ರಹಿಸಿದರು. ಸೋಮವಾರ ಮಧ್ಯಾನ ರಾಯಚೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 70 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೊಂಡು ಬಂದಿದ್ದರು ಕಾಂಗ್ರೆಸ್ ಪಕ್ಷ ಒಮ್ಮೆಯೂ ದಲಿತ ಮುಖ್ಯಮಂತ್ರಿಯನ್ನು ಮಾಡಲು ಮುಂದಾಗಿಲ್ಲ. ಈಗಲಾದರೂ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷ ದಲಿತರ ಋಣ ತೀರಿಸಬೇಕು ಎಂದರು.