ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇದವಾಗಿದ್ದರೂ, ಅಕ್ರಮ ಮದ್ಯ ಸಾಗಣೆ ನಡೆಯುತ್ತಿರುವ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿ ಸುಮಾರು 51 ಲೀಟರ್ ನಷ್ಟು ಮಧ್ಯವನ್ನು ವಶಕ್ಕೆ ಪಡೆದಿದ್ದಾರೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ, ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಗದೀಶ್.ಪಿ ನೇತ್ರತ್ವದ ಪೊಲೀಸರಿಗೆ ದೊರತ ಖಚಿತ ಮಾಹಿತಿಯ ಮೇರೆಗೆ, ತಮ್ಮ ಸಿಬ್ಬಂದಿಗಳೊಂದಿಗೆ ಹುಲೀಗೂಡು ತಂಬಡಿಗೇರಿಯ ರಸ್ತೆಯ ಬಳಿ ದಾಳಿ ನಡೆಸಿದರು. ಈ ವೇಳೆ ರೂ. 28,800 ಮೌಲ್ಯದ 576 ಮದ್ಯದ ಪೌಚ್‌ಗಳು ಒಟ್ಟುಅರೆ 51.840 ಲೀಟರ್ ವಶಪಡಿಸಿಕೊಂಡಿದ್ದಾರೆ