ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಾಡಳಿತ ಸೌಧದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಅಗಸ್ಟ್ ೧೫ ರ ಕುರಿತು ಪೂರ್ವ ಭಾವಿ ಸಭೆ ಜರುಗಿತು. ಈ ಪೂರ್ವಭಾವಿ ಸಭೆಯಲ್ಲಿ ಶಾಸಕ ಜಗದೀಶ್ ಗುಡಗುಂಟಿ ಅಧ್ಯಕ್ಷತೆ ವಹಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ,ತಹಶೀಲ್ದಾರ ಅನೀಲ ಬಡಿಗೇರ,ಪೌರಾಯುಕ್ತ ಜ್ಯೋತಿಗಿರೀಶ, ತಾಲೂಕಾ ಪಂಚಾಯ ಇಒ ಸಚೀನ ಮಾಚನಕನೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.