ನಗರದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಮಾಳ ಮಾರುತಿ ಪೊಲೀಸರು. ನಗರದ ಗ್ಯಾಂಗವಾಡಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿತರನ್ನು ಭಾನುವಾರ ಮಾಳ ಮಾರುತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಆರೋಪಿ ಬಾಳು ದತ್ತಾ ಮತ್ತು ಓಂಕಾರ ಬಾಳು ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ 1.10.000 ಮೌಲ್ಯದ ವಿವಿಧ ಕಂಪನಿಯ ಸಾರಾಯಿಯನ್ನು ವಶಪಡಿಸಿಕೊಂಡು ಮಾಳ ಮಾರುತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ