ಚಾಮರಾಜನಗರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದವರ ದಸರಾ ಉದ್ಘಾಟಕರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಮಹಾರಾಜರು ಒಬ್ಬರಿಗೆ ಮಹಾರಾಜರಲ್ಲ, ಇಡೀ ಸಂಸ್ಥಾನಕ್ಕೆ ಮಹಾರಾಜರು, ಸಕಲರಿಗೂ ಒಳ್ಳೆಯದನ್ನು ಬಯಸುವ ಮಹಾರಾಜರು, ಎಲ್ಲಾ ಜನಾಂಗಕ್ಕೂ ಕೂಡ ಇವರು ಮಹಾರಾಜರು. ಇವರು ಭಾನು ಮುಷ್ತಾಕ್ ವಿಚಾರ ಮಾತನಾಡಿದ್ದೆ ತಪ್ಪು, ಹಿಂದಿನ ಪೂರ್ವಜರು ಅಂಬಾರಿ ಮೇಲೆ ಮೀರ್ಜಾ ಇಸ್ಮಾಯಿಲ್ ಕೂರಿಸಿ ಮೆರವಣಿಗೆ ಮಾಡಿದ ಇತಿಹಾಸವಿದೆ. ಹಿಂದೆ ಕೂಡ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ. ಹೀಗಿರುವಾಗ ಏಕಾಏಕಿ ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನೇ ಮಾಡಿದರು