ಹನೂರು ಪಟ್ಟಣದ ಹೊರವಲಯದಲ್ಲಿರುವ ಎಲ್ಲೆಮಾಳ ರಸ್ತೆಯಲ್ಲಿ ಗಂಭೀರ ಅಪಘಾತ ಸಂಭವಿಸಿದ್ದು, ಕಾರೊಂದು ರಸ್ತೆಬದಿಯ ಹುಣಸೇ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಮಲೆಮಹದೇಶ್ವರ ಬೆಟ್ಟದ ಕಡೆಯಿಂದ ಹನೂರಿನತ್ತ ಬರುತ್ತಿದ್ದ ಕೆಎ 41 ಬಿ 8296 ನಂಬರ್‌ನ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಪರಿಣಾಮವಾಗಿ ಕಾರಿನ ಚಾಲಕ ಕೆಂಗೇರಿ ನಿವಾಸಿ ಸಿದ್ದರಾಜು (39) ಹಾಗೂ ಸಹಪ್ರಯಾಣಿಕರಾದ ಮೂಗುರು ಮೊಳೆ ಗ್ರಾಮದ ಚಿಕ್ಕಣ್ಣ (40) ಮತ್ತು ರೇವಣ್ಣ (50) ಎಂಬಾತರಿಗೆ ಪೆಟ್ಟಾಗಿದೆ.ಅಪಘಾತದ ನಂತರ ಸ್ಥಳೀಯರ ನೆರವಿನಿಂದ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು