ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಮುಖಂಡರು ಕಾರ್ಯಕರ್ತರೆಲ್ಲಾ ಸೇರಿ ದಸರಾ ಉದ್ಘಾಟಕರಾದ ಬಾನು ಮುಷ್ತಾಕ್ ಅವರೊಂದಿಗೆ ನಾವಿದ್ದೇವೆಂಬ ಸಂದೇಶದೊಂದಿಗೆ ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಭಟನೆಯ ಅಭಿಯಾನವನ್ನು ನಡೆಸಿದ್ದಾರೆ ವಿರೋಧ ಪಕ್ಷಗಳು ಯಾವಾಗಲೂ ಅಭಿವೃದ್ಧಿಯ ಪರವಾಗಿ ಪ್ರಶ್ನೆ ಮಾಡುವ ತಾಕತ್ತು ಇರಬೇಕು ಆದರೆ ಇಲ್ಲಿ ಅಭಿವೃದ್ಧಿಯ ಪರವಾಗಿ ಅವರಿಲ್ಲ ಧರ್ಮವನ್ನು ಸಂಕಷ್ಟದಲ್ಲಿ ಸಿಲುಕಿಸಿ ಹಿಂದುತ್ವದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಕುತಂತ್ರಿ ಕೆಲಸವನ್ನು ಮಾಡುತ್ತಿದ್ದಾರೆ ಹಿಂದೂ ಮುಸಲ್ಮಾನರೆಲ್ಲರೂ ನಗರದಲ್ಲಿ ಅಣ್ಣ ತಮ್ಮಂದಿರ ರೀತಿ ಬಾಳುತ್ತಿದ್ದೇವೆ ಆದರೆ ನಮ್ಮ ಮಧ್ಯೆ ಕಂದಕ ಸೃಷ್ಟಿ ಮಾಡುವ ಕೆಲಸ ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ವಾಗ್ದಾಳಿ