ಪಾಲಿಡಾಲ್ ಕುಡಿದ್ರು ಆಸ್ಪತ್ರೆಯಲ್ಲಿ ಬದುಕುಳಿದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಈತನ ಹೆಸರು ರಾಮಾಂಜನಪ್ಪ ಚಿಕ್ಕಬಳ್ಳಾಪುರ ತಾಲೂಕಿನ ಗೌಡಗೆರೆ ಗ್ರಾಮದವರು..ರಾಮಾಂಜನಪ್ಪ ಕಳೆದ 10 ವರ್ಷಗಳ ಹಿಂದೆ ಮದುವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ ಪದೇ ಪದೇ ಕುಡಿಯುವ ವಿಚಾರಕ್ಕೆ ಹೆಂಡತಿ ಬುದ್ದಿವಾದ ಹೇಳುವ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಸಾಕಷ್ಟು ಮನನೊಂದಿದ್ದ ರಾಮಾಂಜನಪ್ಪ ಇದ್ರೆ ನೆಮ್ಮಂದಿಯಾಗಿ ಇರಬೇಕು ಎಂದು ತನ್ನ ಬೈಕ್ ನಲ್ಲಿ ಮನೆಯಿಂದ ಹೊರಟು ಹೋಗಿದ್ದಾನೆ...ಇನ್ನೂ ಮನೆಯಲ್ಲಿ ಏಲೋ ಹೋಗಿರಬಹುದು ಎಂದು ಸುಮ್ಮನಾಗಿದ್ರು..ಆದ್ರೆ ಹೆಂಡತಿಯ ಕಾಟಕ್ಕೆ ಸಾಕಷ್ಟು ಮನನೊಂದಿದ್ದ ರಾಮಾಂಜನಪ್ಪ ಶೆಟ್ಟೆಗೆರೆ ಕ್ರಾಸ್ ಅರಣ್ಯ ಪ್ರದೇಶಕ್ಕೆ ಹೋಗಿ ಪಾಲಿಡಾಲ್ ಕುಡಿದಿದ್ದಾನೆ..