ಇದೇ ವರ್ಷದಿಂದ ಎಸ್‌ಎನ್ ರೆಸಾರ್ಟ್ನಲ್ಲಿ ಕೆಎಎಸ್,ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಕ್ಷೇತ್ರದ ಪ್ರತಿಭಾವಂತ ಉನ್ನತ ವ್ಯಾಸಂಗ ಮಾಡಬಯಸಿವವರಿಗೆ ಅನುಕೂಲವಾಗಲಿದೆ ಎಂದು ಶಾಸಕ,ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಎಸ್.ಎನ್.ರೆಸಾರ್ಟ್ನಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರೆಲ್ಲಾ ಕೆಎಎಸ್,ಐಎಎಸ್ ಕೋಚಿಂಗ್ ಪಡೆಯಲು ಬೆಂಗಳೂರಿಗೆ ಹೋಗುವಂತಾಗಿದೆ,ಈ ಹಿನ್ನೆಲೆ ಪಟ್ಟಣದಲ್ಲೆ ಅವರಿಗೆಲ್ಲಾ ಕೋಚಿಂಗ್ ಸೆಂಟರ್ ತೆರೆದರೆ ಅನುಕೂಲವಾಗಲಿದೆ ಎಂದು ಭಾವಿಸಿ ಈ ವರ್ಷವೇ ತರಬೇತಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.