ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ.. ಮಹಾಮಳೆಗೆ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ಸೇತುಗೆ ಜಲಾವೃತವಾಗಿದ್ದು, ಜಲಾವೃತವಾದ ಸೇತುವೆ ಮೇಲೆ ಯುವಕರು ಬೈಕ್ ಮೇಲೆ ಹೋಗಿ ದುಸ್ಸಾಹಸ ಮೆರೆದಿದ್ದಾರೆ.. ಸೆ27 ರಂದು ಬೆಳಗ್ಗೆ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಬ್ರೀಡ್ಜ್ ಮೇಲೆ ರಭಸವಾಗಿ ನೀರು ಹರಿಯುತ್ತಿದ್ದರು ಸಹ ಬೈಕ್ ಮೇಲೆ ಸೇತುವೆ ದಾಟಿದ್ದಾರೆ.. ಇನ್ನೂ ಸ್ವಲ್ಪವೂ ಯಾಮಾರಿದ್ರೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಬೈಕ್ ಸವಾರರು ಕೊಚ್ಚಿ ಹೋಗೊ ಸಾಧ್ಯತೆ ಇದೆ..