ವರದಕ್ಷಿಣೆ ಕಾಯ್ದೆ ಪ್ರಕಾರದಲ್ಲಿ ಕಳೆದ 23 ವರ್ಷಗಳಿಂದ ನ್ಯಾಯಾಲಯದ ಮೊರೆ ಹೋಗದೆ ತಲೆಮರಿಸಿಕೊಂಡಿದ್ದ ಹೊಸನಗರ ಮೂಲದ ಆರೋಪಿ ಕೊನೆಗೂ ಕಾನೂನಿನ ಬಲೆಗೆ ಸಿಕ್ಕಿದ್ದಾನೆ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಿಗೆ ನಿವಾಸಿ ನಾಸಿರ್ ಖಾನ್(52) ಎಂಬುವವನೇ ಬಂಧಿತ ಆರೋಪಿಯಾಗಿದ್ದು,2022 ರಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಇತನ ವಿರುದ್ಧ ವರದಕ್ಷಿಣೆ ಕಿರುಕುಳದಡಿ ಪ್ರಕರಣ ದಾಖಲಾಗಿತ್ತು. ಆದರೆ ಇದುವರೆಗೂ ನ್ಯಾಯಾಲಯಕ್ಕೆ ಹಾಜರಾಗದೆ. ಪರಾರಿಯಾಗಿದ್ದ, ಈತನನ್ನು ಗಂಗೊಳ್ಳಿ ಪೊಲೀಸರು ಆನಂದಪುರದಲ್ಲಿ ಬಂಧಿಸಿರುವ ಕುರಿತು ಮಂಗಳವಾರ ಮಾಹಿತಿ ಲಭ್ಯವಾಗಿದೆ.