ಬಂಗಾರಕ್ಕನಹಳ್ಳಿ ಬಳಿ ಚಿರತೆ ದಾಳಿಗೆ ನಾಯಿಯೊಂದು ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ಬಂಗಾರಕ್ಕನಹಳ್ಳಿ ಕೂನಬೇವು ರಸ್ತೆ ಮಧ್ಯದ ಕೊಂಚೆ ಶಿವರುದ್ರಪ್ಪ ಎಂಬುವವರ ಜಮೀನಿನ ಪಕ್ಕದ ರವಿ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದ್ದು ಸುಮಾರು 50 ಸಾವಿರಕ್ಕು ಅಧಿಕ ಬೆಲೆ ಬಾಳುವ ನಾಯಿ ಚಿರತೆ ದಾಳಿಗೆ ಮೃತಪಟ್ಟಿದೆ. ಇನ್ನೂ ಬೆಳಗಿನ ಜಾವ 3 ಗಂಟೆ ವೇಳೆಗೆ ಘಟನೆ ನಡೆದಿದ್ದಾಗಿ ಅಂದಾಜಿಸಿದ್ದು ಬೆಳಗ್ಗೆ 11 ಗಂಟೆಗೆ ಎಂದಿನಂತೆ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.