ಕೊಳ್ಳೇಗಾಲ: ಪಟ್ಟಣದ ಭೀಮನಗರದ ಹಿರಿಯ ಯಜಮಾನ ಮತ್ತು ಪತ್ರಿಕೆಯ ವರದಿಗಾರರಾಗಿರುವ ಚಿಕ್ಕಮಾಳಿಗೆರ ರವರ ಮೇಲೆ ಕ್ಷಣಿಕ ಗಲಾಟೆಯಿಂದ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕೈ ಮುರಿದ ಘಟನೆ ಜರುಗಿದ್ದು ಅವರು ಪ್ರಸ್ತುತ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಮಾಳಿಗೆರವರು ತಮ್ಮ ಪತ್ನಿಯೊಂದಿಗೆ ದೇವಾಂಗ ಪೇಟೆಯ ಹೋಟೆಲ್ ವೊಂದದಕ್ಕೆ ಊಟಕ್ಕೆ ತೆರಳಿದ್ದ ಸಂದರ್ಭ, ಪಾಳ್ಯ ಗ್ರಾಮದ ರವಿನಾಯಕ ಎಂಬಾತ ಹೋಟೆಲ್‌ನಲ್ಲಿ ಗಲಾಟೆಮಾಡುತ್ತಿದ್ದಾಗ ಮಧ್ಯಸ್ಥಿಕೆ ಮಾಡಲು ಚಿಕ್ಕಮಾಳಿಗೆರವರು ಯತ್ನಿಸಿದಾಗ, ಆತನು ಆಕ್ರೋಶಗೊಂಡು ಅವರ ಮೇಲೆ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.