ಹೊಸನಗರ ತಾಲೂಕಿನ ಕೊಳವಳ್ಳಿ ಗ್ರಾಮದ ಸಂಪಳ್ಳಿ ಎಂಬಲ್ಲಿ ವಿದ್ಯುತ್ ಕಂಬದ ಬಳಿ ಮೇಯುತ್ತಿದ್ದ ಎರಡು ಜಾನುವಾರುಗಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 6 ಗಂಟೆಗೆ ನಡೆದಿದೆ. ಜಾನುವಾರು ಓಡಿಸಲು ಹೋದ ಯುವತಿ ಪ್ರಿಯಾಂಕ ಎಂಬುವರಿಗೂ ಹಾಗೂ ಇನ್ನೊಂದು ಜಾನುವಾರಿಗೂ ವಿದ್ಯುತ್ ಶಾಕ್ ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಧಾವಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.