ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಪೊಲೀಸರ ಜಿಪಿಗೆ ಪೊಲೀಸರೇ ಫೈನ್ ಹಾಕಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ. ಕೊಪ್ಪ ಪಟ್ಟಣದಲ್ಲಿ ಎನ್ ಆರ್ ಪುರ ಸಿಪಿಐ ಪೊಲೀಸ್ ಜೀಪ್ ನೋ ಪಾರ್ಕಿಂಗ್ ನಿಂತಿದ್ದ ಕಾರಣ, ಜೀಪ್ ಟ್ರಾಫಿಕ್ ರೂಲ್ಸ್ ಪಾಲನೆ ಮಾಡದ ಹಿನ್ನೆಲೆ ಕೇಸ್ ಹಾಕಲಾಗಿದೆ. 500 ರೂಪಾಯಿ ದಂಡ ಹಾಕಿ ಬಿಡಿಸಿಕೊಂಡು ಸ್ಥಳದಿಂದ ಸಿಪಿಐ ಕೊಪ್ಪ ಪೊಲೀಸರು ಹೋಗಿದ್ದಾರೆ. ಕೊಪ್ಪ ಠಾಣೆಯ ಪಿ.ಎಸ್.ಐ ಬಸವರಾಜ್ ಅವರಿಂದ ಎನ್ ಆರ್ ಪುರ ಸಿಪಿಐ, ಜಿಪಿಗೆ ಫೈನ್ ಹಾಕಿದ್ದು, ಕಾನೂನು ಎಲ್ಲರಿಗೂ ಒಂದೇ ಎನ್ನುವ ಸಂದೇಶ ಸಾರಿರುವುದು ಬಾರಿ ಮೆಚ್ಚುಗೆಗೆ ಕಾರಣವಾಗಿದೆ.