ಜೊಯಿಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆಗಾಗಿ ಮಹಿಳೆಗೆ ಕಿರುಕುಳ ನೀಡಿ, ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡಿ, ಆಕೆ ನೇಣು ಹಾಕಿಕೊಂಡು ಮರಣ ಉಂಟಾಗುವಂತೆ ಮಾಡಿದ ಆರೋಪಿಗಳಿಗೆ ಶಿರಸಿ ನಗರದ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ ಕಿಣಿ, ಆರೋಪಿಗೆ 10 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 17000 ದಂಡ ಮತ್ತು ಮೃತ ಮಹಿಳೆ ತಂದೆ ತಾಯಿಗೆ 25000 ಪರಿಹಾರ ರೂಪದಲ್ಲಿ ನೀಡುವಂತೆ ಶಿಕ್ಷೆ ವಿಧಿಸಿ ಹಾಗೂ ಮೃತಳ ತಂದೆ ತಾಯಿ ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಬಹುದೆಂದು ತೀರ್ಪು ನೀಡಿರುವುದಾಗಿ ನಗರದಲ್ಲಿ ಜಿಲ್ಲಾ ನ್ಯಾಯಾಲಯ ಶನಿವಾರ ಸಂಜೆ 6ಕ್ಕೆ ಮಾಹಿತಿ ನೀಡಿದೆ.