ಲಿಂಗಾಯತ ಪ್ರತ್ಯೇಕ ಧರ್ಮ 12ನೇ ಶತಮಾನದಿಂದ ಕೂಗು ಇದೆ. ಲಿಂಗಾಯತ ಹಾಗೂ ವೀರಶೈವ ಧರ್ಮ ಎರಡು ಒಂದೇ ಹೀಗಾಗಿ ಸಮಾಜದಲ್ಲಿ ಯಾವುದೇ ಗೊಂದಲ ಸೃಷ್ಟಿಮಾಡಿಕೊಳ್ಳಲಾರದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಧ್ವನಿ ಆಗಬೇಕು. ಲಿಂಗಾಯತ ಧರ್ಮ ಎಂಬುದು ಕೇವಲ ರಾಜಕೀಯ ಹಿತಾಶಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಜಯಪುರದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿಡುಮಾಮುಡಿ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.