ತುಮಕೂರು ನಗರದಲ್ಲಿ ಆ. 30 ರಂದು ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮಕ್ಕೆ ಮೇಘಾಲಯ ರಾಜ್ಯದ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಭಾಗವಹಿಸುವ ಹಿನ್ನಲೆ ರಾಜ್ಯಪಾಲರ ರಕ್ಷಣಾ ಸಿಬ್ಬಂದಿ ವೇದಿಕೆ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ 6.20 ರ ಸಮಯದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಯೊಂದಿಗೆ ವೇದಿಕೆ ಪರಿ ಶೀಲನೆ ನಡೆಸಿದರು. ಹಾಗೆಯೇ ರಾಜ್ಯಪಾಲರು ಕುಳಿತುಕೊಳ್ಳುವ ಆಸನದ ಬಗ್ಗೆಯೂ ರಕ್ಷಣಾ ಸಿಬ್ಬಂದಿ ಆಯೋಜಕರಿಗೆ ಕೆಲವು ಸಲಹೆಗಳನ್ನ ನೀಡಿದರು. ಹೀಗಾಗಲೇ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ಆಪರೇಷನ್ ಸಿಂಧೂರ ವಿಜಯೋತ್ಸವ ಸಮಿತಿಯವರು ಜರ್ಮನ್ ಟೆಂಟ್ ಹಾಕಿ ಸಮಾರಂಭಕ್ಕೆ ಸಜ್ಜುಗೊಳಿಸಿದ್ದಾರೆ .