ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಶಂಭೆವಾಡಿ ಗ್ರಾಮದ ನೆರೆಹಾವಳಿ ಪ್ರದೇಶಕ್ಕೆ ಶಾಸಕ ಅಶೋಕ ಮನುಗುಳಿ ಟ್ರ್ಯಾಕ್ಟರ್ ಮೂಲಕ ವೀಕ್ಷಣೆ ಮಾಡಿದರು. ಭೀಕರ ಮಳೆ ಅವಾಂತರಕ್ಕೆ ಗ್ರಾಮವು ಜಲಾವೃತ ಗೊಂಡ ಹಿನ್ನಲೆ ಭಾನುವಾರ ಸಾಯಂಕಾಲ 6ಗಂಟೆ ಸುಮಾರಿಗೆ ಶಾಸಕ ಅಶೋಕ ಮನಗೂಳಿ ಟ್ರ್ಯಾಕ್ಟರ್ ಮೂಲಕ ಗ್ರಾಮಸ್ಥರೊಂದಿಗೆ ವೀಕ್ಷಣೆ ಮಾಡಿದರು. ನಂತರ ಗ್ರಾಮದ ಮುಖಂಡರೊಂದಿಗೆ ಕುಂದು ಕೊರತೆ ಸಭೆ ನಡೆಸಿ, ಶೀಘ್ರವೇ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ನೀಡಿದರು. ವ್ಯವಸ್ಥೆ ಕಲ್ಪಿಸಿ ಕೊಡುವವರೆಗೂ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರು ಇರಬೇಕೆಂದು ಸೂಚನೆ ನೀಡಿದರು. ಈ ವೇಳೆ ಗ್ರಾಮದ ಮುಖಂಡರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.