ವರ್ಕ್ ಫ್ರಮ್ ಹೋಮ್ ನೆಪದಲ್ಲಿ ವ್ಯಕ್ತಿಯೋರ್ವನಿಗೆ ಹಣವನ್ನು ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಭದ್ರೆಗೌಡನ ದೊಡ್ಡಿ ಗ್ರಾಮದ ಸಂದೀಪರವರಿಗೆ 2,17,290 ಹಣ ವಂಚನೆಯಾಗಿದೆ . ಸಂದೀಪ್ ರವರ ಟೆಲಿಗ್ರಾಂಗೆ ಒಂದು ಲಿಂಕ್ ಬಂದಿತ್ತು, ಆ ಲಿಂಕ್ ಓಪನ್ ಮಾಡಿ ನೋಡಿದಂತ ಸಂದರ್ಭದಲ್ಲಿ ಮೊದಲಿಗೆ ಟ್ರೈನಿಂಗ್ ಮಾಡಬೇಕು ಅಂತ ಹೇಳಿ ತಿಳಿಸಿ ಟ್ರೈನಿಂಗ್ ಮುಗಿಸಿದ ನಂತರ ಹಣವನ್ನು ಕೂಡ ಅವರೇ ಹಾಕಿದ್ರು. ಇದಾದ ನಂತರ ನೀವೇ ಹಣವನ್ನು ಹಾಕಿದ್ರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಅಂತ ಹೇಳಿ ನಂಬಿಸಿ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಲಾಗಿದೆ ಈ ಸಂಬಂಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರ ಮಾಡಲಾಗಿದೆ.