Download Now Banner

This browser does not support the video element.

ಬೆಂಗಳೂರು ಉತ್ತರ: ಬ್ಯಾಂಕ್ ಹಾಗೂ ಜ್ಯುವೆಲರಿ ದೋಚಲು ಹೋಗಿ ಫೇಲ್ ಆದವರು, ಬೆಂಗಳೂರಲ್ಲಿ ಬೆಳ್ಳಿ ಕದ್ದು ಸಿಕ್ಕಿಬಿದ್ರು!

Bengaluru North, Bengaluru Urban | Aug 26, 2025
ಒಂದು ಬ್ಯಾಂಕ್, ಜುವೆಲರಿ ದೋಚಲು ಹೋಗಿ ಫೇಲ್ ಆಗಿದ್ರು, ಬೆಂಗಳೂರಿನಲ್ಲಿ ಬೆಳ್ಳಿ ಕದ್ದು ಸಿಕ್ಕಿಬಿದ್ದಿದ್ರು..!‌ ರಾಜ್ಯದಲ್ಲಿ ಹಲವು ಕೇಸ್ ಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಗೋವಿಂದರಾಜನಗರ ಪೊಲೀಸರು ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ಮೊಹಮ್ಮದ್ ಫೈಯಾಜ್ (59) (ಈತನ ಮೇಲೆ 25 ಕೇಸ್ ಗಳಿವೆ), ಮೊಹಮ್ಮದ್ ಫರಾಜ್ @ ದೇವಿ (35) (ಈತನ ಮೇಲೆ 13 ಕೇಸ್), ಭೂದೇಶ್ ಗೌಡ (52) (ಈತನ ಮೇಲೆ 5 ಕೇಸ್ ಗಳಿವೆ), ಪ್ರಸಾದ್ (49) (ಈತನ ಮೇಲೆ 18ಕೇಸ್ ಗಳಿವೆ). ಹಲವು ವರ್ಷಗಳಿಂದ ಮನೆ ಕಳ್ಳತನ, ದರೋಡೆಯನ್ನೇ ಖಯಾಲಿ ಮಾಡಿಕೊಂಡಿದ್ದ ಆರೋಪಿಗಳು, ಬೀದರ್, ಹುಬ್ಬಳ್ಳಿ, ಚಿತ್ರದುರ್ಗ, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕೈಚಳಕ ತೋರಿಸಿದ್ದರು.
Read More News
T & CPrivacy PolicyContact Us