ಛತ್ರಪತಿ ಶಿವಾಜಿ ಮಹಾರಾಜರು ಆಫ್ಜಲ್ ಖಾನ್ ಗೆ ವಧೆ ಮಾಡುವ ಚಿತ್ರದ ಫ್ಲೆಕ್ಸ್ ತೆರವಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹಿಂದು ಜಾಗರಣ ವೇದಿಕೆ ಮುಖಂಡ ಸತೀಶ ಪೂಜಾರಿಗೆ ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಕೆಟಿಜೆ ನಗರದ ನಿವಾಸದಲ್ಲಿ ಇದ್ದ ಸತೀಶ ಪೂಜಾರಿಗೆ ವಿದ್ಯಾ ನಗರ ಪೊಲೀಸರು ಯಾವುದೇ ಪೂರ್ವ ಮಾಹಿತಿ ಇಲ್ಲದೇ ಧಾವಿಸಿ, ತಮ್ಮ ವಶಕ್ಕೆ ಪಡೆದರು. ನಂತರ ವಿದ್ಯಾ ನಗರ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವ ವಿಚಾರ ಗೊತ್ತಾದ ಯುವಕರು, ಹಿಂದೂ ಪರ ಸಂಘಟನೆಗಳು, ಸಂಘ ಪರಿವಾರದ ಮುಖಂಡರು ಸತೀಶ ಪೂಜಾರಿ ಮನೆ ಬಳಿ ಬರುವಷ್ಟರಲ್ಲಿ ಪೊಲೀಸರು ಸತೀಶರನ್ನು ಠಾಣೆಗೆ ಕರೆದೊಯ್ದಿದ್ದರು.