ಶಾರದಾ ಜನ್ನತ್ ನಗರದ ಜೈ ಭುವನೇಶ್ವರಿ ಸಂಘದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮನೆಯ ತಾರಸಿ ಮೇಲೆ ನಿಂತು ಇಬ್ಬರು ಮಕ್ಕಳು ಗಣಪತಿ ಮೂರ್ತಿಗೆ ಉಗಿದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಭಾನುವಾರ ನಡೆದಿದ್ದು, ಬಳಿಕ ಅಚತುರ್ಯದ ಬಗ್ಗೆ ಮಕ್ಕಳ ತಾಯಿ ಕ್ಷಮೆಯಾಚನೆ ಮಾಡಿದ್ದಾರೆ. ತಮ್ಮ ಮಕ್ಕಳು ಗೊತ್ತಿಲ್ಲದೆ ಹೀಗೆ ಮಾಡಿದ್ದಾರೆ. ನಾವು ಯಾವುದೇ ದೇವರಿಗೆ ಗೌರವ ತೋರಲ್ಲ ಎಂದು ಹೇಳಿಕೆ ನೀಡಿ ಮಕ್ಕಳ ತಾಯಿ ಕ್ಷಮೆಯಾಚಿಸಿದ್ದಾರೆ. ತಮ್ಮ ಮಕ್ಕಳಿಗೆ ಸರಿಯಾದ ಬುದ್ದಿ ಹೇಳುತ್ತೇವೆಂದು ಸಹ ಅವರು ಹೇಳಿದ್ದಾರೆ.