ಅವರು ಇಂದು ತಾಲ್ಲೂಕಿನ ಆಗಟಮಡಕ ಗ್ರಾಮದಲ್ಲಿ 60 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಾಗರಿಕತೆಯ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ರಸ್ತೆಯು ಗ್ರಾಮ, ಪಟ್ಟಣ, ಹಾಗೂ ನಗರಗಳನ್ನು ಒಟ್ಟುಗೂಡಿಸುವ, ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ಪಥವಾಗಿದ್ದು ಅವುಗಳ ಅಭಿವೃದ್ಧಿ ಪ್ರಮುಖವೆನಿಸುತ್ತದೆ. ಈ ನಿಟ್ಟಿನಲ್ಲಿ ಬಾಗೇಪಲ್ಲಿ ವಿಧಾನಸಭ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರಮುಖ ಆಧ್ಯತೆಯನ್ನು ನೀಡಲಾಗುತ್ತಿದ್ದು ಈಗಾಗಲೇ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಉಳಿದಿರುವ ರಸ್ತೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.