ಬಾಗೇಪಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲು ಹೆಣ್ಣು ಮಕ್ಕಳು ಮಹಿಳೆಯರು ಹಾಗೂ ಯುವ ಸಮುದಾಯ ಮುಂದಾಗಿದ್ದು, ಮಂಗಳವಾರ ಗೌರಿ ಹಬ್ಬ ಇರುವುದರಿಂದ ಗೌರಿಯ ಪೂಜೆ ನಡೆಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬುಧವಾರ ಗಣೇಶ ಹಬ್ಬ ಇರುವುದರಿಂದ ಪುರಸಭೆ ವ್ಯಾಪ್ತಿ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲು ಯುವಕರ ಸಂಘಗಳು, ಸಂಘ-ಸಂಸ್ಥೆಯವರು ನಿಗದಿತ ಸ್ಥಳಗಳಲ್ಲಿ ಚಪ್ಪರ ಹಾಕುವುದು, ಗಣಪತಿ ಮೂರ್ತಿ ಖರೀದಿ ಹಾಗೂ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.