ಬಾಮಣಗಿಯ ಗವೇಗಾಳಿಯಲ್ಲಿ ಮರಗಳನ್ನು ಕಡಿದುರುಳಿಸಿದ ಹೆಸ್ಕಾಂ, ಪರಿಹಾರಕ್ಕೆ ರೈತ ಮಾರುತಿ ಬಸಪ್ಪ ಬಾರಿಕೇರ ಆಗ್ರಹ ಜೋಯಿಡಾ : ವಿದ್ಯುತ್ ಲೈನಿಗೆ ತೊಂದರೆಯಾಗದಿರಲೆಂದು ಮರದ ಟೊಂಗೆ ಕಡಿಯುವುದರ ಬದಲು ಜೋಯಿಡಾ ತಾಲೂಕಿನ ಬಾಮಣಗಿಯ ಗವೇಗಾಳಿಯಲ್ಲಿ ಸ್ವಂತ ಜಾಗದಲ್ಲಿದ್ದ ಮರವನ್ನೇ ಹೆಸ್ಕಾಂ ಇಲಾಖೆಯವರು ಕಡಿದುರುಳಿಸಿದುವುದನ್ನು ಖಂಡಿಸಿ, ಸೂಕ್ತ ಪರಿಹಾರಕ್ಕಾಗಿ ಜಾಗದ ಮಾಲಕ ಹಾಗೂ ರೈತ ಮಾರುತಿ ಬಸಪ್ಪ ಬಾರಿಕೇರ ಅವರು ಆಗ್ರಹಿಸಿದ್ದಾರೆ. ಅವರು ಗುರುವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮದ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.