ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರಾವಣ ಮಾಸದ ಕೊನೆ ದಿನವಾದ ಇಂದು ದೇವರಿಗೆ 108 ಕುಂಭಾಭಿಷೇಕ ನೆರವೇರಿತು. ಶ್ರೀ ಕ್ಷೇತ್ರದಲ್ಲಿ ಶ್ರಾವಣ ಮಾಸದ ಮೊದಲ ದಿನ ಮತ್ತು ಕಡೇ ದಿನದಂದು ದೇವರಿಗೆ 108 ಕುಂಭಗಳ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಿದ್ದು ಅದರಂತೆ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ 108 ಬೇಡಗಂಪಣ ಅರ್ಚಕರು ಮಜ್ಜನ ಬಾವಿಯಿಂದ ಪವಿತ್ರ ಜಲವನ್ನು ಮೆರವಣಿಗೆಯಲ್ಲಿ ತಂದರು. ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕಮಜ್ಜನಬಾವಿಯಿಂದ 108 ಕುಂಭಗಳನ್ನು ಹೊತ್ತು ತಂದರು.