ವಿಶೇಷಚೇತನರು ಈ ವಾಹನಗಳ ಸದುಪಯೋಗದೊಂದಿಗೆ ಸಹಕಾರ ಬ್ಯಾಂಕ್‌ಗಳ ಸಾಲಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಕರೆ ನೀಡಿದರು. ದಾವಣಗೆರೆ ನಗರದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ 4 ಗಂಟೆಗೆ ಚನ್ನಗಿರಿ ತಾಲೂಕಿನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. ವಿವಿಧ ಕಾರಣಗಳಿಂದ ಅಂಗಾಂಗಗಳನ್ನು ಕಳೆದುಕೊಂಡಿರುವ ಮಹಿಳೆಯರು ಮತ್ತು ಪುರುಷರು ಕೂಡ ಇಂದು ಸಣ್ಣಪುಟ್ಟ ಕೆಲಸ ಹಾಗೂ ಉದ್ಯಮಗಳನ್ನು ನಡೆಸಿಕೊಂಡು ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಓಡಾಡಲು ತ್ರಿಚಕ್ರ ವಾಹನಗಳು ಅನುಕೂಲವಾಗಲಿದ್ದು, ಅವರಿಗೂ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಲಿದೆ ಎಂದು ತಿಳಿಸಿದರು.