ವಿಜಯಪುರ ಜಿಲ್ಲೆಯ ರೂಗಿ ಗ್ರಾಮದಲ್ಲಿ ಅದ್ದೂರಿಯಾಗಿ ಜಟ್ಟಿಂಗೇಶ್ವರ ಮಹಾರಾಜರ ಜಾತ್ರಾ ಮಹೋತ್ಸವ ನಡೆಯಿತು. ಭಕ್ತರಿಗೆ ಕಲ್ಪವೃಕ್ಷವಾಗಿ ಲಕ್ಷಾಂತರ ಭಕ್ತರ ಆರಾಧ್ಯ ದೈವರಾಗಿ ಭಕ್ತರ ಮನೆ ಮನಗಳಲ್ಲಿ ಮಲ್ನಾಡ್ ಗೂಳಿ ಎಂದು ಪ್ರಸಿದ್ಧಿ ಹೊಂದಿರುವ ಶ್ರೀ ಜೆಟ್ಟಿಂಗೇಶ್ವರರ ಜಾತ್ರೆ ವರ್ಷದಲ್ಲಿ ಮೂರು ಬಾರಿ ನಡೆಯುವುದು ವಿಶೇಷ . ಯುಗಾದಿ, ದೀಪಾವಳಿ ಹಾಗೂ ಗಣೇಶ ಚತುರ್ಥಿಯಂದು ಜಾತ್ರೆ ನಡೆಯುತ್ತದೆ. ಈ ಬಾರಿ ಅದ್ದೂರಿಯಾಗಿ ಜಾತ್ರೆ ಆಚರಿಸಲಾಯಿತು