ದೊಡ್ಡಮಳೂರು ಗ್ರಾಮ ಪಂಚಾಯತಿ ಅಧ್ಯಕ್ಷನ ವಿರುದ್ಧ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಗ್ರಾ.ಪಂ ಅಧ್ಯಕ್ಷ ಚೇತನ್ ಕುಮಾರ್ ವಿರುದ್ಧ 11 ಸದಸ್ಯರು ಸೋಮವಾರ ಅವಿಶ್ವಾಸದ ಪರ ಮತ ಚಲಾಯಿಸಿದ್ದರಿಂದ ಅಧ್ಯಕ್ಷ ಸ್ಥಾನವನ್ನ ಚೇತನ್ ಕುಮಾರ್ ಕಳೆದುಕೊಂಡರು. ಜಿಲ್ಲಾ ಎಸಿ ಬಿನ್ನೋಯ್ ಅವರ ಸಮ್ಮುಖದಲ್ಲಿ ಅವಿಶ್ವಾಸ ನಿರ್ಣಯ ಸಭೆ ನಡೆದಿತ್ತು.