ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮಣುರ ಗ್ರಾಮದಲ್ಲಿ ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಗ್ರಾಮದ ಐತಿಹಾಸಿಕ ದ್ವಾರಬಾಗಿಲಿಗೆ ಹೊಂದಿಕೊಂಡ ಹುಡೆ ಗುಮ್ಮಟ ಕುಸಿತಗೊಂಡಿದೆ. ಗ್ರಾಮದ ತಡೆ ಗೋಡೆ ಮತ್ತು ಇನ್ನೊಂದು ಹುಡೆ ಗುಮ್ಮಟ ಕೂಡಾ ಸಿಥಿ ಲಾವಸ್ಥೆಯಲ್ಲಿದೆ. ಗ್ರಾಮದ ಒಳಗಡೆ ತಡೆ ಗೋಡೆ ಮತ್ತು ಹುಡೆ ಗುಮ್ಮಟದ ಹತ್ತಿರ ಪ್ರತಿ ದಿನಾಲೂ ಜನರು ಓಡಾಡುವ ರಸ್ತೆಯಾಗಿದ್ದು. ಶಾಲಾ ಮಕ್ಕಳು ಕೂಡಾ ಇದೆ ತಡೆ ಗೋಡೆ ಹತ್ತಿರ ಹಾದು ಹೋಗುತ್ತಾರೆ...