ತಲೆಬುರುಡೆ ಪ್ರಕರಣದ ತನಿಖೆಗಾಗಿ ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹಾಗೂ ಪ್ರದೀಪ್ ಎಸ್ಐಟಿ ವಿಚಾರಣೆಗಾಗಿ ಮಂಗಳವಾರ ಬೆಳಗ್ಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಈ ಆರು ಮಂದಿಯನ್ನು ಆರನೇ ದಿನದ ವಿಚಾರಣೆಗೆ ಎಸ್ಐಟಿ ವಿಚಾರಣೆಗೆ ಕರೆಸಿದೆ. ಸೋಮವಾರ ಹಿಂಬದಿ ದಾರಿ ಹಿಡಿದಿದ್ದ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಮಾಧ್ಯಮದೆದುರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇವರೊಂದಿಗೆ ಸಂಬಂಧಿಯಾಗಿರುವ ಸಿಂಧೂದೇವಿ ಕೂಡ ಎಸ್ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ.